ಚಾಪ್‍ಮನ್, ಜಾನ್ ಜಾ

1862-1933. ಅಮೆರಿಕದ ಕವಿ. ಪ್ರಬಂಧಕಾರ ಮತ್ತು ವಕೀಲ. ಈತ ಹುಟ್ಟಿದ್ದು ನ್ಯೂಯಾರ್ಕ್ ನಗರದಲ್ಲಿ. 1884 ರಲ್ಲಿ ಹಾರ್ವಡ್ ವಿಶ್ವವಿದ್ಯಾಲಯದ ಪದವೀಧರನಾಗಿ 1888ರಲ್ಲಿ ನ್ಯೂಯಾರ್ಕಿನ ವಕೀಲ ಸಂಘಕ್ಕೆ ದಾಖಲಾದ 1898ರ ವರೆಗೂ ಸಕ್ರಿಯವಾಗಿ ವಕೀಲಿ ವೃತ್ತಿ ನಡೆಸುತ್ತಿದ್ದ. ಅನಂತರ ಬರೆಯಲು ಮೊದಲು ಮಾಡಿದ. ಈತನ ವೈಶಿಷ್ಟ್ಯಪೂರಿತ ಪ್ರಬಂಧಗಳು ಗಮನವನ್ನು ಸೆಳೆದುವು. ಎಮರ್‍ಸನ್ ಅಂಡ್ ಅದರ್ ಎಸ್ಸೇಸ್ (1898) ; ಕಾಸಸ್ ಅಂಡ್ ಕಾನ್‍ಸಿಕ್ವೆನ್ಸಸ್ (1898) ; ದಿ ಮೇಯ್ಡ್ಸ್ ಫರ್‍ಗಿವ್‍ನೆಸ್ (ಕಾವ್ಯ ನಾಟಕ -1908) ; ಲರ್ನಿಂಗ್ ಅಂಡ್ ಅದರ್ ಎಸ್ಸೇಸ್ (1910 ; ದಿ ಟ್ರೀಸನ್ ಅಂಡ್ ಡೆತ್ ಆಫ್ ಬೆನೆಡಿಕ್ಟ್ ಆರ್ನಲ್ಡ್ (ನಾಟಕ -1910) ; ವಿಲಿಯಮ್ ಲಾಯ್ಡ್ ಗ್ಯಾರಿಸನ್ (1913) ; ನೋಟ್ಸ್ ಆನ್ ರಿಲಿಜನ್ (14915) ; ದಿ ಗ್ರೀಕ್  ಜೀನಿಯಸ್ (1915) ; ಎ ಗ್ಲಾನ್ಸ್ ಟು ವರ್ಡ್ ಷೇಕ್ಸ್‍ಪಿಯರ್ (1922) ; ಲೆಟಸ್ ಅಂಡ್ ರಿಲಿಜನ್ (1924) ; ಡಾಂಟೆ (1927)-ಇವು ಈತನ ಕೃತಿಗಳು.	    (ಕೆ.ವಿ.ಎಸ್.ಟಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ